ರಮೇಶ ಪರವ, ಮಾರೂರು- ತನ್ನ ಚಿಕ್ಕ ಪ್ರಾಯದಿಂದಲೇ ರಾಜನ್ ದೈವಗಳ ಸೇವೆಯನ್ನು ಅತ್ಯಂತ ನೇಮ-ನಿಷ್ಠೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿದವರು. ಸಾಂಪ್ರದಾಯಿಕ ಶೈಲಿಯ ಬಣ್ಣಗಾರಿಕೆ, ನಿರರ್ಗಳವಾದ ಸಂಧಿ-ಪಾಡ್ದನ, ಕಟ್ಟುಕಟ್ಟಳೆಯ ನುಡಿಗಳು ಇವರ ನೇಮದ ವಿಶೇಷತೆ. ಕುಟುಂಬದ ಹಾಗೂ ಪ್ರತಿಷ್ಠಿತ ಗುತ್ತು-ಬರ್ಕೆಗಳ ದೈವಗಳಿಂದ ಹಿಡಿದು ಗ್ರಾಮ ದೈವ, ಮಾಗಣೆ ದೈವ, ಸೀಮೆ ದೈವಗಳವರೆಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. ಇವರು ಕಟ್ಟುತ್ತಿದ್ದ ಪ್ರಧಾನ ದೈವಗಳು- ಧರ್ಮರಸು, ಕುಮಾರ ದೇವತೆ, ಮೈಸಂದಾಯ, ಕೊಡಮಣಿತ್ತಾಯ, ಕುಕ್ಕಿನಂತಾಯ, ಆಜಿಕೈತ್ತಾಯ, ನೆಲ್ಲಿತ್ತಾಯ, ಬನ್ನಡ್ಕತ್ತಾಯ, ಕೇತುರ್ಲಾಯ, ಮೂಜಿಲ್ನಾಯ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ವರ್ಣಾರ ಪಂಜುರ್ಲಿ, ಸೆಮಿಕಲ್ಲ ಪಂಜುರ್ಲಿ, ಕುಂಟಾಲ ಜುಮಾದಿ, ಜೂಮ್ರ ಜುಮಾದಿ, ಪಿಲಿ ಚಾಮುಂಡಿ, ಕನ್ನಡ ದೈವ, ಸತ್ಯದೇವತೆ ಅಲ್ಲದೆ ಇನ್ನೂ ಹಲವಾರು ದೈವಗಳ ಸೇವೆ ಸಲ್ಲಿಸಿದ್ದರು. ಅಂತಹ ಸರಳ-ಸಜ್ಜನ ನೇಮ ನಿಷ್ಠ ಕಲಾವಿದ ಇಂದು ದೇವರ ಪಾದ ಸೇರಿದ್ದಾರೆ. ಸಾಧಕ ಮರೆಯಾಗಿರಬಹುದು, ಆದರೆ ದೈವ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಯಾವತ್ತಿಗೂ ಅಮರ... ಇಂತಹ ಮಹಾನ್ ಕಲಾವಿದನಿಗೆ ನಮ್ಮ ನಮನಗಳು... ಓಂ ಶಾಂತಿಃ Dharmarasu -Maisandaya-Kumara Devate Nema Annappa Panjurli Nema, Mijar Satyadevate kola, Mijar Kethurlaya Nema, Bannadka Kannada Daiva Nema, Bannadka Bannadkathaya Nema, Bannadka Moojilnaya Nema, Mallipady-Guruvayanakere Kuntal Jumadi Nema, Yedapadau Rakteshwari Nema, Maroor
Hide player controls
Hide resume playing